19/06/2026

Law Guide Kannada

Online Guide

ಜಡ್ಜ್ ಗಳ ಅಧಿಕೃತ ನಿವಾಸಗಳಿಗೆ ಭೂಮಿ ಮರುಹಂಚಿಕೆ ಪ್ರಶ್ನಿಸಿದ್ದ PIL ವಜಾ

ಬೆಂಗಳೂರು: ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ (KVAFSU) ಸ್ವಾಮ್ಯದ 4 ಎಕರೆ ಭೂಮಿಯನ್ನು ಹೈಕೋರ್ಟ್ ಸೇವೆಯಲ್ಲಿರುವ ನ್ಯಾಯಮೂರ್ತಿಗಳ ಅಧಿಕೃತ ನಿವಾಸಗಳ ನಿರ್ಮಾಣಕ್ಕಾಗಿ ಹಂಚಿಕೆ ಮಾಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಹೆಬ್ಬಾಳದಲ್ಲಿರುವ ಪಶುವೈದ್ಯಕೀಯ ಕಾಲೇಜಿನ ಆವರಣದಿಂದ ಭೂಮಿಯನ್ನು ವರ್ಗಾಯಿಸುವುದನ್ನು ಪ್ರಶ್ನಿಸಿ ಪಶುವೈದ್ಯಕೀಯ ಸಂಘಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಹೈಕೋರ್ಟ್ ವಜಾಗೊಳಿಸಿದ್ದು, ಹಲವಾರು ನ್ಯಾಯಮೂರ್ತಿಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ನ್ಯಾಯಮೂರ್ತಿಗಳ ನಿವಾಸಗಳ ನಿರ್ಮಾಣಕ್ಕಾಗಿ ಭೂಮಿ ಹಂಚಿಕೆ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿಗಳ ಅಧಿಕೃತ ನಿವಾಸಗಳ ನಿರ್ಮಾಗಿ 4 ಎಕರೆ ಭೂಮಿಯನ್ನು ಹಂಚಿಕೆ ಮಾಡಿರುವುದರಿಂದ ಸಂಸ್ಥೆಯ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗುವುದಿಲ್ಲ, ಏಕೆಂದರೆ ಸಂಸ್ಥೆಯು ತನ್ನ ಕಡ್ಡಾಯ ಅಗತ್ಯಕ್ಕಿಂತ ಬಹಳ ಹೆಚ್ಚಿನ ಭೂಮಿಯನ್ನು ಹೊಂದಿದೆ ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯವು, ನ್ಯಾಯಮೂರ್ತಿಗಳಿಗೆ ಸಮರ್ಪಕ ವಸತಿ ಸೌಲಭ್ಯ ಕಲ್ಪಿಸುವುದು ಸಾರ್ವಜನಿಕ ಹಿತಾಸಕ್ತಿಯ ಪ್ರಮುಖ ಉದ್ದೇಶವಾಗಿದ್ದು, ವೈದ್ಯಕೀಯ ಕಾಲೇಜಿಗೆ ಯಾವುದೇ ನಷ್ಟವಾಗುವುದಿಲ್ಲ. ಎಂದು ಅಭಿಪ್ರಾಯಪಟ್ಟಿದೆ. ಏಕೆಂದರೆ, ಕಾಲೇಜು ತನ್ನ ಕಡ್ಡಾಯ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಭೂಮಿಯನ್ನು ಹೊಂದಿದೆ ಎಂದು ನ್ಯಾಯಾಲಯ ಕಂಡುಹಿಡಿದಿದೆ.

ಇನ್ನು ಅರ್ಜಿದಾರರು, ಈ ಭೂಮಿ ವರ್ಗಾವಣೆಯಿಂದ ಕಾಲೇಜಿನ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳಿಗೆ ಹಾನಿಯಾಗುತ್ತದೆ ಮತ್ತು ಭವಿಷ್ಯದ ವಿಸ್ತರಣೆಗೆ ಅಗತ್ಯವಿರುವ ಭೂಮಿ ಕಡಿಮೆಯಾಗುತ್ತದೆ ಎಂದು ವಾದಿಸಿದರು.

*62 ನ್ಯಾಯಮೂರ್ತಿಗಳ ಮಂಜೂರಾತಿ ಹುದ್ದೆಗಳ ವಿರುದ್ಧ ಕೇವಲ 19 ಅಧಿಕೃತ ನಿವಾಸಗಳು ಮಾತ್ರ ಲಭ್ಯವಿವೆ. ಹಲವಾರು ನ್ಯಾಯಮೂರ್ತಿಗಳು ಹೈಕೋರ್ಟ್ ನ್ಯಾಯಮೂರ್ತಿಗಳಂತಹ ಸಾಂವಿಧಾನಿಕ ಹುದ್ದೆಗೆ ತಕ್ಕದಲ್ಲದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ನಾವು ಗಮನಿಸಿದ್ದೇವೆ. ನಾಲ್ಕನೇ ಪ್ರತಿವಾದಿ ಕಾಲೇಜು ತನ್ನ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಭೂಮಿಯನ್ನು ಹೊಂದಿರುವುದು ನಿರ್ವಿವಾದ ನ್ಯಾಯ ಗ್ರಾಮದಲ್ಲಿರುವ ಈಗಿನ ನಿವಾಸಗಳ ಸಮೀಪದಲ್ಲಿ ಸೇವೆಯಲ್ಲಿರುವ ಹೈಕೋರ್ಟ್ ನ್ಯಾಯಮೂರ್ತಿಗಳ ಅಧಿಕೃತ ನಿವಾಸಗಳ ನಿರ್ಮಾಣಕ್ಕಾಗಿ 4 ಎಕರೆ ಭೂಮಿಯನ್ನು ವರ್ಗಾಯಿಸುವ ಸರ್ಕಾರದ ನಿರ್ಧಾರದಿಂದ ಕಾಲೇಜಿಗೆ ಯಾವುದೇ ರೀತಿಯ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿತು.

ಏನಿದು ಪ್ರಕರಣ ಹಿನ್ನೆಲೆ
ಈ ಪ್ರಕರಣದಲ್ಲಿ, ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಎಕರೆ ಭೂಮಿಯನ್ನು ವರ್ಗಾಯಿಸಿದ ಸರ್ಕಾರದ ಆದೇಶವನ್ನು ಪ್ರಶ್ನಿಸಲಾಗಿತ್ತು. ಅದರಲ್ಲಿನ 4 ಎಕರೆ ಭೂಮಿಯನ್ನು ಕರ್ನಾಟಕ ಹೈಕೋರ್ಟ್ ಸೇವೆಯಲ್ಲಿರುವ ನ್ಯಾಯಮೂರ್ತಿಗಳ ನಿವಾಸಗಳ ನಿರ್ಮಾಣಕ್ಕಾಗಿ, 3 ಎಕರೆ ಭೂಮಿಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ಮೀಸಲಿಡಲಾಗಿತ್ತು.

ಅರ್ಜಿದಾರರು, ಕಾಲೇಜಿನ ಭೂಮಿಯನ್ನು ಬೋಧನೆ, ಸಂಶೋಧನೆ, ಮೇವು ಬೆಳೆಯುವಿಕೆ. ಜಾನುವಾರು ನಿರ್ವಹಣೆ ಮತ್ತು ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ವಾದಿಸಿದರು. ಭೂಮಿ ವರ್ಗಾವಣೆಯಿಂದ ಸಂಸ್ಥೆಯ ಭವಿಷ್ಯದ ಅಭಿವೃದ್ಧಿ ಯೋಜನೆಗಳಿಗೆ ತೊಂದರೆಯಾಗಬಹುದು ಹಾಗೂ ಭಾರತೀಯ ಪಶುವೈದ್ಯಕೀಯ ಮಂಡಳಿಯ ಮಾನದಂಡಗಳನ್ನು ಉಲ್ಲಂಘಿಸುವ ಸಾಧ್ಯತೆ ಇದೆ ಎಂದು ಹೇಳಿದರು.

“ನ್ಯಾಯಾಂಗದ ಸ್ವಾತಂತ್ರವು ಸಂವಿಧಾನದ ಮೂಲಭೂತ ರಚನೆಯ ಒಂದು ಪ್ರಮುಖ ಅಂಶವಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ವೇತನ, ಪಿಂಚಣಿ, ವಸತಿ, ಗ್ರಂಥಾಲಯ, ತರಬೇತಿ, ಸಾರಿಗೆ ಹಾಗೂ ನಿವೃತ್ತಿ ವಯಸ್ಸು ಸೇರಿದಂತೆ ಸೇವಾ ಷರತ್ತುಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಬಹುಮುಖ ಅಂಶಗಳಾಗಿವೆ.ಪ್ರಸ್ತುತ ನ್ಯಾಯಮೂರ್ತಿಗಳಿಗೆ ಲಭ್ಯವಿರುವ ವಸತಿ ಸೌಲಭ್ಯಗಳು ಅಪರ್ಯಾಪ್ತವಾಗಿವೆ ಎಂಬ ರಾಜ್ಯದ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು.
ಪಶುವೈದ್ಯಕೀಯ ಕಾಲೇಜು ನನ್ನ ಅಗತ್ಯಕ್ಕಿಂತ ಬಹಳ ಹೆಚ್ಚಿನ ಭೂಮಿಯನ್ನು ಹೊಂದಿದೆ ಮತ್ತು ಭೂಮಿ ವರ್ಗಾವಣೆಯಿಂದ ಯಾವುದೇ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವುದಿಲ್ಲ ಎಂದು ಕಂಡುಕೊಂಡ, ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿತು

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.