ವಿಕ್ರಯ ಮೊತ್ತವಿಲ್ಲದ ಸ್ಥಿರಾಸ್ತಿಯ ‘ಕ್ರಯ ಪತ್ರ’ ಅನೂರ್ಜಿತವಾಗುತ್ತಾ..? ಸುಪ್ರೀ ಕೋರ್ಟ್ ಸ್ಪಷ್ಟನೆಯಿದು…
ನವದೆಹಲಿ: ವಿಕ್ರಯ ಮೊತ್ತವಿಲ್ಲದ ಸ್ಥಿರಾಸ್ತಿಯ ‘ಕ್ರಯ ಪತ್ರ’ ಅನೂರ್ಜಿತವಾಗಿದ್ದು, ಇದಕ್ಕೆ ಕಾಲಮಿತಿ ಕಾಯ್ದೆಯ ಸೆಕ್ಷನ್ 59 ಅನ್ವಯಿಸದು ಎಂದು ಸುಪ್ರೀ ಕೋರ್ಟ್ ಸ್ಪಷ್ಟಪಡಿಸಿದೆ.
ಶಾಂತಿ ದೇವಿ(ಮೃತ) ವಾರಿಸು ಗೋರನ್ ವಿರುದ್ಧ ಜಗನ್ ದೇವಿ ಮತ್ತಿತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲ ಮತ್ತು ಆರ್. ಮಹಾದೇವನ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ವಿಕ್ರಯ ಮೊತ್ತದ ಪ್ರಸ್ತಾಪ ಇಲ್ಲದ ಸ್ಥಿರಾಸ್ತಿಯ ‘ಕ್ರಯಪತ್ರ’ ಅನೂರ್ಜಿತವಾಗಿದೆ. ಇದಕ್ಕೆ ಕಾಲಮಿತಿ ಕಾಯ್ದೆಯ ಸೆಕ್ಷನ್ 59 ಅನ್ವಯವಾಗುವುದಿಲ್ಲ ಎಂದು ಹೇಳಿದೆ.
ಸದರಿ ಪ್ರಕರಣದಲ್ಲಿ ‘ಕ್ರಯಪತ್ರ’ದ ಜಾರಿಯ ಸಂದರ್ಭದಲ್ಲಿ ಮಾರಾಟಗಾರರು ಸ್ಥಿರಾಸ್ತಿಯ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಮೊತ್ತವನ್ನು ಖರೀದಿದಾರರಿಂದ ಪಡೆದುಕೊಂಡಿಲ್ಲ. ಅದ್ದರಿಂದ, ಈ ಕ್ರಯಪತ್ರ ಅನೂರ್ಜಿತವಾಗಿದೆ. ಹಾಗಾಗಿ, ಈ ಕ್ರಯಪತ್ರದ ರದ್ದು ಕೋರಬೇಕಾಗಿಲ್ಲ.ಈ ಪ್ರಕರಣದಲ್ಲಿ ಕಾಲಮಿತಿಯ ಸೆಕ್ಷನ್ 65 ಅನ್ವಯವಾಗುವುದಿಲ್ಲ. ಬದಲಿಗೆ ಸೆಕ್ಷನ್ 59 ಅನ್ವಯವಾಗುತ್ತದೆ ಎಂಬ ಹೈಕೋರ್ಟ್ ತೀರ್ಪು ದೋಷಯುಕ್ತವಾಗಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
