ಬಲವಂತದ ಧಾರ್ಮಿಕ ಮತಾಂತರ ಕೇಸ್: ನಿದಾ ಖಾನ್ ಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್
ಮುಂಬೈ: ಬಲವಂತದ ಮತಾಂತರ, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನಿದಾ ಎಜಾಜ್ ಖಾನ್ ಗೆ ಮಧ್ಯಂತರ ಜಾಮೀನನ್ನು ನೀಡಲು ನ್ಯಾಯಾಲಯಕ್ಕೆ ನಿರಾಕರಿಸಿದೆ.
ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಬಲವಂತದ ಮತಾಂತರ, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿದಾ ಎಜಾಜ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಮಧ್ಯಂತರ ಜಾಮೀನನ್ನು ನೀಡಲು ನಿರಾಕರಿಸಿ ವಿಚಾರಣೆಯನ್ನು ಏಪ್ರಿಲ್ 27 ಕ್ಕೆ ಮುಂದೂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿಧಾ ಖಾನ್ ಮೇಲೆ ದೂರು ದಾಖಲಾಗುತ್ತಿದಂತೆ, ನಿದಾ ನಾಸಿಕ್ನ ನ್ಯಾಯಾಲಯದಲ್ಲಿ, ತಾನು ಗರ್ಭಿಣಿಯಾಗಿದ್ದು, ನನ್ನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರೀಕ್ಷಣಾ ಜಾಮೀನನ್ನು ನೀಡಬೇಕಾಗಿ ಕೋರಿದ್ದರು.
ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಎಂಟು ಆರೋಪಿಗಳಿದ್ದು, ಅವರಲ್ಲಿ ಖಾನ್ ಮಾತ್ರ ಇನ್ನೂ ಬಂಧನಕ್ಕೊಳಗಾಗಿಲ್ಲ. ಖಾನ್ ಅವರು ಏಪ್ರಿಲ್ 18 ರಂದು ವಕೀಲರಾದ ಬಾಬಾ ಸಯ್ಯದ್ ಮತ್ತು ರಾಹುಲ್ ಕಾಸ್ಸಿವಾಲ್ ಮೂಲಕ ಕ್ರಿಮಿನಲ್ ಜಾಮೀನು ಅರ್ಜಿಯನ್ನು ಸಲ್ಲಿಸಿ. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಗಿಯುವವರೆಗೆ ಖಾನ್ ಬಂಧನದಿಂದ ಮಧ್ಯಂತರ ರಕ್ಷಣೆ ಕೋರಿದ್ದರು.
ಇದನ್ನು ನಾಸಿಕ್ ರಸ್ತೆಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಧೀಶ ಕೆಜಿ ಜೋಶಿ ತಿರಸ್ಕರಿಸಿದ್ದು, ಅರ್ಜಿಯ ವಿಚಾರಣೆ ಅಂತಿಮವಾಗಿ ಏಪ್ರಿಲ್ 27 ರಂದು ನಡೆಯಲಿದೆ. ಪ್ರಕರಣಕ್ಕಾಗಿ ರಚಿಸಲಾದ ವಿಶೇಷ ತನಿಖಾ ತಂಡ (ಎಸ್ಐಟಿ) ಅವರ ಹುಡುಕಾಟವನ್ನು ಮುಂದುವರಿಸಿದ್ದರೂ, ನಿದಾ ಖಾನ್ ಬಂಧನದಿಂದ ರಕ್ಷಣೆಗಾಗಿ ನ್ಯಾಯಾಲಯದ ಮೆಟ್ಟಿಲೇರಿದರು.
ಪ್ರಕರಣದ ಹಿನ್ನೆಲೆ
ಟಿಸಿಎಸ್ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿ ಅವರನ್ನು ಇಸ್ಲಾಂಗೆ ಮತಾಂತರಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪಗಳು ನಿದಾಖಾನ್ ಸೇರಿ ಬಂಧಿತರಾಗಿರುವ ವಿವಿಧ ಆರೋಪಿಗಳ ಮೇಲಿದೆ. ಪ್ರಕರಣಧಲ್ಲಿ ಎಂಟು ಆರೋಪಿಗಳನ್ನು ಆರು ಪುರುಷರು ಮತ್ತು ಪುಣೆ ಮೂಲದ ಕಾರ್ಯಾಚರಣೆ ವ್ಯವಸ್ಥಾಪಕ ಸೇರಿದಂತೆ ಇಬ್ಬರು ಮಹಿಳೆಯರನ್ನು ಹೆಸರಿಸಲಾಗಿದೆ.
ಈಗಾಗಲೇ ಪೊಲೀಸರು ಶಫಿ ಶೇಖ್, ಆಸಿಫ್ ಅನ್ಸಾರಿ, ತೌಸಿಫ್ ಅತ್ತರ್, ಶಾರುಖ್ ಖುರೇಷಿ, ರಜಾ ಮೆಮನ್, ಡ್ಯಾನಿಶ್ ಶೇಖ್ ಮತ್ತು ಕಾರ್ಯಾಚರಣೆ/ಮಾನವ ಸಂಪನ್ಮೂಲ ವ್ಯವಸ್ಥಾಪಕಿ ಅಶ್ವಿನಿ ಚೈನಾನಿ ಎಂಬ 7 ಆರೋಪಿಗಳನ್ನ ಬಂಧಿಸಿದ್ದಾರೆ. ಆದರೆ ಪ್ರಕರಣದಲ್ಲಿ ಇನ್ನೂ ಬಂಧನವಾಗದ ಏಕೈಕ ಆರೋಪಿ ನಿದಾ ಖಾನ್ ಆಗಿದ್ದು, ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಉಲ್ಲೇಖಗಳನ್ನು ಮಾಡಿರುವ ಆರೋಪದ ಮೇಲೆ ಕೇವಲ ಒಂದು ಎಫ್ಐಆರ್ನಲ್ಲಿ ಮಾತ್ರ ಅವರ ಹೆಸರು ದಾಖಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
