ವಾಣಿಜ್ಯ ನ್ಯಾಯಾಲಯಗಳಲ್ಲಿ ಮಧ್ಯಸ್ಥಿಕೆ ತೀರ್ಪುಗಳ ಅಮಲ್ಜಾರಿಗೆ ಅರ್ಜಿಗಳ ಮಾನ್ಯತೆ: ಹೈಕೋರ್ಟ್ ಸಮರ್ಥನೆ
ಬೆಂಗಳೂರು: ವಾಣಿಜ್ಯ ನ್ಯಾಯಾಲಯಗಳಲ್ಲಿ ಮಧ್ಯಸ್ಥಿಕೆ ತೀರ್ಪುಗಳ ಅಮಲ್ಜಾರಿಗೆ ಸಲ್ಲಿಸುವ ಅರ್ಜಿಗಳ ಮಾನ್ಯತೆಯನ್ನು ಕರ್ನಾಟಕ ಹೈಕೋರ್ಟ್ ಸಮರ್ಥಿಸಿದೆ.
Abraham Memorial Education Trust vs. Prodigy Development Institution Pvt. Ltd. (WP No. 9659/2025) ಪ್ರಕರಣದಲ್ಲಿ ಇಂತಹ ಜಾರಿಗೆ ಸಂಬಂಧಿಸಿದ ವಿಚಾರಗಳನ್ನು ವಾಣಿಜ್ಯ ನ್ಯಾಯಾಲಯ ವಿಚಾರಣೆ ನಡೆಸುವ ಅಧಿಕಾರವಿಲ್ಲವೆಂದು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು, ಮಧ್ಯಸ್ಥಿಕೆ ತೀರ್ಪುಗಳ (Arbitral Awards) ಜಾರಿಗೆ ಸಂಬಂಧಿಸಿದ ಅರ್ಜಿಗಳನ್ನು ವಾಣಿಜ್ಯ ನ್ಯಾಯಾಲಯಗಳ ಮುಂದೆ ಸಲ್ಲಿಸುವುದು ಮಾನ್ಯವಾಗಿದೆ ಎಂದು ದೃಢಪಡಿಸಿತು.
ಏನಿದು ವಿವಾದ..
ಅಬ್ರಹಾಂ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ಅರ್ಜಿದಾರ / ತೀರ್ಪುಬಾಧ್ಯ ಮತ್ತು ಪ್ರಾಡಿಜಿ ಡೆವಲಪ್ಟೆಂಟ್ ಇನ್ಸ್ಟಿಟ್ಯೂಷನ್ ಪ್ರೈ. ಲಿ. (ಪ್ರತಿವಾದಿ / ಡಿಕ್ಕಿ ಹಕ್ಕುದಾರ) ನಡುವಿನ ಒಪ್ಪಂದದಿಂದ ಈ ಪ್ರಕರಣ ಉಂಟಾಗಿದ್ದು, 29 ಶಾಲಾ ಬಸ್ಗಳನ್ನು 2.70 ಕೋಟಿ ರೂ.ಗೆ ಮಾರಾಟ ಮಾಡುವ ಒಪ್ಪಂದದಡಿಯಲ್ಲಿ, ಪ್ರತಿವಾದಿಯು 12.50 ಕೋಟಿ ಮುಂಗಡ ಹಣವನ್ನು ಪಾವತಿಸಿದ್ದರು. ನಂತರ ಪ್ರತಿವಾದಿಯು ಒಪ್ಪಂದವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆಗೆ ಮೊರೆ ಹೋಗಲಾಯಿತು.
ನವೆಂಬರ್ 19, 2019 ರಂದು ನೀಡಲಾದ ಮಧ್ಯಸ್ಥಿಕ ತೀರ್ಪಿನಲ್ಲಿ ಅರ್ಜಿದಾರರು 22.50 ಕೋಟಿಯನ್ನು ಬಡ್ಡಿಯೊಂದಿಗೆ ಹಿಂತಿರುಗಿಸಬೇಕೆಂದು ಆದೇಶಿಸಲಾಯಿತು. ಈ ತೀರ್ಪನ್ನು ಮಧ್ಯಸ್ಥಿಕೆ ಮತ್ತು ಸಮನ್ವಯ ಕಾಯ್ದೆ, 1996ರ ಸೆಕ್ಷನ್ 34ರ ಅಡಿಯಲ್ಲಿ ದೆಹಲಿ ಹೈಕೋರ್ಟ್ ರದ್ದು ಪಡಿಸಿ, ಹೊಸ ಮಧ್ಯಸ್ಥಿಕೆ ನ್ಯಾಯಮಂಡಳಿಯನ್ನು ರಚಿಸಿತು.
ಹೊಸ ನ್ಯಾಯಮಂಡಳಿಯು ಮತ್ತೊಮ್ಮೆ ಪ್ರತಿವಾದಿಯ ಪರವಾಗಿ ತೀರ್ಪು ನೀಡಿ, 22.50 ಕೋಟಿಯೊಂದಿಗೆ ಬಡ್ಡಿ ಹಾಗೂ ವೆಚ್ಚಗಳನ್ನು ಸೇರಿಸಿ ಒಟ್ಟು 7,63,91,433.53 ರೂ.ಗಳನ್ನ ಪಾವತಿಸಲು ಆದೇಶಿಸಿತು.ಈ ಎರಡನೇ ಮಧ್ಯಸ್ಥಿಕೆ ತೀರ್ಪನ್ನು ಅರ್ಜಿದಾರನು ದೆಹಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದು, ಆ ಪ್ರಕ್ರಿಯೆಗಳು ಪ್ರಸ್ತುತ ಬಾಕಿ ಇವೆ.
ಇದರ ಮಧ್ಯೆ, ಪ್ರತಿವಾದಿಯು ಬೆಂಗಳೂರು ಘಿI ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ (ನಿಯೋಜಿತ ವಾಣಿಜ್ಯ ನ್ಯಾಯಾಲಯ) ಮುಂದೆ ವಾಣಿಜ್ಯ ಜಾರಿಗೆ ಅರ್ಜಿ ಸಂ.180/2024 ಅನ್ನು ಸಲ್ಲಿಸಿದರು. ಮಾರ್ಚ್ 7. 2025ರ ಆದೇಶದ ಮೂಲಕ, ವಾಣಿಜ್ಯ ನ್ಯಾಯಾಲಯವು ಜಾರಿಗೆ ಅರ್ಜಿ ಮಾನ್ಯವಾಗಿದೆ ಎಂದು ಘೋಷಿಸಿತು. ಇದರಿಂದ ಅಸಮಾಧಾನಗೊಂಡ ಅರ್ಜಿದಾರರು , ಸಂವಿಧಾನದ ಅನುಚ್ಚೇದ 227ರ ಅಡಿಯಲ್ಲಿ ಕರ್ನಾಟಕ ಹೈಕೋರ್ಟ್ಗೆ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, “ಮಧ್ಯಸ್ಥಿಕೆ ತೀರ್ಪನ್ನು ಜಾರಿಗೆ ತರಲು ಸಲ್ಲಿಸಲಾದ ಜಾರಿಗೆ ಅರ್ಜಿ, ವಾಣಿಜ್ಯ ನ್ಯಾಯಾಲಯದ ಮುಂದೆ ಮಾನ್ಯವೇ? ಎಂದು ಪ್ರಶ್ನಿಸಿತು. ಕೇರಳ ಮತ್ತು ಛತ್ತೀಸ್ಗಢ ಹೈಕೋರ್ಟ್ಗಳು ಜಾರಿಗೆ ಅರ್ಜಿಗಳು ಮಾನ್ಯವಲ್ಲವೆಂದು ಹೇಳಿದ್ದರೂ, ಗುಜರಾತ್, ರಾಜಸ್ಥಾನ, ದೆಹಲಿ, ಆಂಧ್ರಪ್ರದೇಶ ಮತ್ತು ಅಲಹಾಬಾದ್ ಹೈಕೋರ್ಟ್ಗಳು ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ನ್ಯಾಯಾಲಯ ಗಮನಿಸಿತು. ಸೆಕ್ಷನ್ 10 ಅಡಿಯಲ್ಲಿ ಮಧ್ಯಸ್ಥಿಕೆ ತೀರ್ಪಿನ ಜಾರಿಗೆ ಅರ್ಜಿಯನ್ನು ವಾಣಿಜ್ಯ ನ್ಯಾಯಾಲಯದಲ್ಲಿ ಸಲ್ಲಿಸಬಹುದೆಂದು ಹೇಳಲಾಗಿದೆ.
ವಿವಿಧ ಹೈಕೋರ್ಟ್ ವಿಭಾಗೀಯ ಪೀಠಗಳು ನೀಡಿರುವ ತೀರ್ಪುಗಳೊಂದಿಗೆ-ವಿಶೇಷವಾಗಿ ARUN KUMAR JAGATRAMKA ಪ್ರಕರಣದಲ್ಲಿ ನೀಡಲಾದ ತೀರ್ಪಿನೊಂದಿಗೆ ನಾನು ಗೌರವಪೂರ್ವಕ ಒಪ್ಪಿಗೆ ವ್ಯಕ್ತಪಡಿಸುತ್ತೇನೆ. ವಾಣಿಜ್ಯ ನ್ಯಾಯಾಲಯಗಳ ಕಾಯ್ದೆಯ ಸೆಕ್ಷನ್ 10 ಸ್ಪಷ್ಟವಾಗಿದ್ದು, ವಾಣಿಜ್ಯ ವಿವಾದದ ಲಕ್ಷಣಗಳು ಉಳಿದಿರುವ ತನಕ, ಮಧ್ಯಸ್ಥಿಕೆ ತೀರ್ಪು (ಡಿಕ್ರಿ) ಜಾರಿಗೆ ಅರ್ಜಿಯನ್ನು ವಾಣಿಜ್ಯ ನ್ಯಾಯಾಲಯದಲ್ಲಿ ಸಲ್ಲಿಸಬಹುದು ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು.
ಸೆಕ್ಷನ್ 10ರಲ್ಲಿ ಬಳಸಿರುವ “applications” (ಅರ್ಜಿಗಳು) ಎಂಬ ಪದವು ಜಾರಿಗೆ ಅರ್ಜಿಗಳನ್ನೂ ಒಳಗೊಂಡಷ್ಟು ವಿಶಾಲವಾಗಿದೆ ಎಂದು ನ್ಯಾಯಪೀಠ ತಿಳಿಸಿತು. ಅರ್ಜಿದಾರರ ಆಕ್ಷೇಪಣೆಯಲ್ಲಿ ಯಾವುದೇ ತಾರತಮ್ಮ ಕಾಣದ ಕಾರಣ, ಅರ್ಜಿಯನ್ನು ವಜಾಗೊಳಿಸಿ, ವಾಣಿಜ್ಯ ನ್ಯಾಯಾಲಯ ನೀಡಿದ್ದ ಆದೇಶವನ್ನು ದೃಢಪಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
