ಹಿಂದೆ ಸರಿಯಲು ಒಪ್ಪದ ನ್ಯಾಯಾಧೀಶೆ ಶರ್ಮಾ: ಅರವಿಂದ ಕೇಜ್ರಿವಾಲ್ ಅರ್ಜಿ ವಜಾ
ನವದೆಹಲಿ: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಸ್ವರ್ಣಕಾಂತ್ ಶರ್ಮಾ ಅವರು ಹಿಂದೆ ಸರಿಯುವಂತೆ ಕೋರಿ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೋರಿದ ಅರ್ಜಿಯಲ್ಲಿ ಹುರುಳಿಲ್ಲ” ಎಂದು ಹೇಳಿದ ನ್ಯಾಯಮೂರ್ತಿ ಸ್ವರ್ಣಕಾಂತ್ ಶರ್ಮಾ ಅರ್ಜಿಯನ್ನು ವಜಾಗೊಳಿಸಿದರು.
ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾ. ಸ್ವರ್ಣಕಾಂತ್ ಶರ್ಮಾ ಅವರು ನಿರಾಕರಿಸಿದ್ದು ಅರ್ಜಿಯನ್ನು ವಜಾಗೊಳಿಸಿದ್ದಾರೆ, ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೋರಿದ ಅರ್ಜಿಯಲ್ಲಿ ಹುರುಳಿಲ್ಲ. ಯಾವುದೇ ಒತ್ತಡಕ್ಕೆ ನ್ಯಾಯಾಂಗ ಮಣಿಯುವುದಿಲ್ಲ. ನಿಷ್ಪಕ್ಷಪಾತತೆ ಕಾಪಾಡಿಕೊಳ್ಳುವುದು ನ್ಯಾಯಾಂಗದ ಮಹತ್ವವಾಗಿದೆ. ಸಲ್ಲದ ರಾಜಕೀಯ ಆರೋಪಗಳಿಗೆ ಹೆದರಿ ವಿಚಾರಣೆಯಿಂದ ಹಿಂದೆ ಸರಿಯುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯಾಯಾಲಯ, ರಾಜಕೀಯ ವ್ಯಕ್ತಿಗಳ ಆರೋಪಗಳಿಗೆ ಹೆದರಿ ಹಿಂದೆ ಸರಿದರೆ ಶರಣಾಗತಿಯ ಸಂಕೇತವಾಗುತ್ತದೆ. ಒಮ್ಮೆ ತಲೆ ಬಾಗಿದರೆ ನ್ಯಾಯಾಲಯ, “ ನ್ಯಾಯಮೂರ್ತಿಗಳು ಅಷ್ಟೇ ಏಕೆ ನ್ಯಾಯಾಂಗ ವನ್ನು ಬಗ್ಗಿಸಬಹುದು, ನಮಗೆ ಇಷ್ಟ ಬಂದಂತೆ ಬದಲಾಯಿಸಬಹುದು ಎಂಬ ಸಂದೇಶ ರವಾನೆಯಾಗುತ್ತದೆ. ಇಂಥ ಪ್ರವೃತ್ತಿಗೆ ನ್ಯಾಯಾಂಗ ಅವಕಾಶ ನೀಡುವುದಿಲ್ಲ ಎಂದು ನ್ಯಾ. ಸ್ವರ್ಣಕಾಂತ್ ಶರ್ಮಾ ತಿಳಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
