ವೈವಾಹಿಕ ಅತ್ಯಾಚಾರ: ಕರ್ನಾಟಕದ ಪ್ರಕರಣ ಕೇಂದ್ರ ಬಿಂದು: ಮೊದಲ ವಿಚಾರಣೆಗೆ ಸುಪ್ರೀಂ ತೀರ್ಮಾನ
ನವದೆಹಲಿ: ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿನಾಯಿತಿ ಪ್ರಶ್ನಿಸಿದ್ದ ಹಲವು ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ಈ ಪೈಕಿ ಕರ್ನಾಟಕದ ಪ್ರಕರಣವೇ ಕೇಂದ್ರು ಬಿಂದುವಾಗಿದ್ದು ಮೊಲಿಗೆ ಇದೇ ಕೇಸ್ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.
ಪತ್ನಿಯನ್ನು ಲೈಂಗಿಕ ಗುಲಾಮಳಂತೆ ನಡೆಸಿಕೊಂಡ ಆರೋಪದಡಿ ಪತಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಹೈಕೋರ್ಟ್ ಅವಕಾಶ ನೀಡಿ ತೀರ್ಪು ಪ್ರಕಟಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಪತಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್ಕಾಲ್ಯ ಬಾಗ್ನಿ ಮತ್ತು ವಿ. ಮೋಹನಾ ಅವರಿದ್ದ ಪೀಠವು, ಮೊದಲು ಕರ್ನಾಟಕದ ಪ್ರಕರಣವನ್ನು ಪರಿಶೀಲಿಸುತ್ತೇವೆ. ಹೈಕೋರ್ಟ್ನ ತೀರ್ಪನ್ನು ಸಮರ್ಥಿಸಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದಾರೆ. ಇಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲು ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ಅವಕಾಶವಿದೆಯೇ? ಎಂಬುದನ್ನು ನ್ಯಾಯಾಲಯ ಪರಿಶೀಲಿಸಲಿದೆ ಎಂದು ಹೇಳಿದೆ.
ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ ಕುರಿತಾದ ಸಾಂವಿಧಾನಿಕ ಸಿಂಧುತ್ವವನ್ನೂ ನ್ಯಾಯಪೀಠ ಪರಿಶೀಲನೆ ನಡೆಸಲಿದೆ. ತೀರ್ಪು ನೀಡುವ ಮೊದಲು ಎಲ್ಲರ ವಾದ ಆಲಿಸುತ್ತೇವೆ ಎಂದು ತಿಳಿಸಿದೆ, ಈ ನಡುವೆ ಕರ್ನಾಟಕ ಪ್ರಕರಣದಲ್ಲಿ ಸನ್ನಿವೇಶದ ಗಂಭೀರತೆ ಮನಗಂಡು, ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ವಿನಾಯಿತಿ ಇದ್ದರೂ ಅತ್ಯಾಚಾರ ವಿರೋಧಿ ಕಾನೂನಿನ ಅಡಿಯಲ್ಲಿ ಕಾನೂನು ಕ್ರಮ ಮುಂದುವರಿಸಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ. ಪತ್ನಿಯನ್ನು ಪತಿ ಅಕ್ಷರಶಃ ಲೈಂಗಿಕ ಗುಲಾಮಳಂತೆ ನಡೆಸಿಕೊಂಡಿರುವುದು ಗಮನಕ್ಕೆ ಬಂದ ಹಿನ್ನೆಲೆ ಹೈಕೋರ್ಟ್ ಈ ನಿಲುವಿಗೆ ಬಂದಿದೆ ಎಂದು ಎಂದು ವಕೀಲ ಜೈಸಿಂಗ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸುವ ಕುರಿತಂತೆ ವಿಚಾರಣೆಗೆ ನಿರ್ಧರಿಸುವ ಮುನ್ನ ಕೇಂದ್ರದ ನಿಲುವಿಗಾಗಿ ಕಾಯುವುದಾಗಿ ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿತ್ತು. ಅದಾಗಿ, ಎರಡು ದಿನಗಳ ನಂತರ ಈ ಬೆಳವಣಿಗೆ ಆಗಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
