ಸಿಂಗಲ್ ಸೈಟ್, ಪ್ರಾಪರ್ಟಿ ಕಾರ್ಡ್ ಗೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್, ಬ್ರೋಕರ್
ಮಂಗಳೂರು: ಸಿಂಗಲ್ ಸೈಟ್ ಮತ್ತು ಪ್ರಾಪರ್ಟಿ ಕಾರ್ಡ್ಗೆ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸರ್ವೆಯರ್ ಮತ್ತು ಬ್ರೋಕರ್ ನನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಸರ್ವೇಯರ್ ನಂದೀಶ್ ಮತ್ತು ಬ್ರೋಕರ್ ದಿವಾಕರ್ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದವರು. ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಿಕೊಡಲು 43 ಸಾವಿರ ಲಂಚ ಪಡೆದುಕೊಂಡಿದ್ದ ಮಂಗಳೂರಿನ ಭೂ ಮಾಪಕ (ಸರ್ವೇಯರ್) ನಂದೀಶ್ ಮತ್ತು ಮಧ್ಯವರ್ತಿ (ಬೋಕರ್) ದಿವಾಕರ್ ಇಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ
ಮಂಗಳೂರಿನ ಬಜಾಲ್ ಮತ್ತು ಕಂಕನಾಡಿ ಗ್ರಾಮದ ಜಮೀನಿಗೆ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಿಕೊಡುವುದಾಗಿ ಆರೋಪಿಗಳು ವ್ಯಕ್ತಿಯೊಬ್ಬರಿಂದ 43 ಸಾವಿರ ರೂ. ಪಡೆದುಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಪ್ರಕರಣದ ವಿವರ
2025ರ ಫೆಬ್ರವರಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಜಮೀನಿಗೆ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ದೂರುದಾರರ ತಾಯಿ ತನ್ನ ಹೆಸರಿನಲ್ಲಿರುವ ಕಂಕನಾಡಿ ಗ್ರಾಮದ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ಫೆಬ್ರವರಿ 2025ರಂದು ಮಂಗಳೂರು ಯು.ಪಿ.ಓ.ಆರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.
ಏಪ್ರಿಲ್ 2025ರಂದು ಸರ್ವೇ ನಡೆಸಿದ್ದ ನಂತರ ನಂದೀಶ ಅರ್ಜಿದಾರರಿಂದ ರೂ. 6500/-ಪಡೆದುಕೊಂಡಿದ್ದರು. ಅಲ್ಲದೆ, ಬೋಕರ್ ಕಡೆಯಿಂದ ರೂ. 20,000/- ಲಂಚವನ್ನು ಇನ್ನೊಬ್ಬ ಆರೋಪಿ ದಿವಾಕರ್ ಮೂಲಕ ಪಡೆದುಕೊಂಡಿದ್ದರು.
ಬಜಾಲ್ ಮತ್ತು ಕಂಕನಾಡಿ ಎರಡೂ ಗ್ರಾಮದ ಜಮೀನುಗಳ ಸಿಂಗಲ್ ಸೈಟ್ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ ರೂ. 18000/- ಪಡೆದುಕೊಂಡಿದ್ದರು. ಜೂನ್ 18ರಂದು ಹೆಚ್ಚುವರಿಯಾಗಿ ರೂ. 2000/- ಲಂಚದ ಹಣ ಪಡೆಯುತ್ತಿರುವಾಗ ಸರ್ವೇಯರ್ ನಂದೀಶ ಮತ್ತು ಬೋಕರ್ ದಿವಾಕರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಲೋಕಾಯುಕ್ತ ಎಸ್ಪಿ ಕುಮಾರಚಂದ್ರ, ಪೊಲೀಸ್ ಠಾಣೆಯ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ ನೇತೃತ್ವದ ಪೊಲೀಸರ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
