ದಿನಗೂಲಿ ನೌಕರರ ಸೇವೆ ಖಾಯಂಗೊಳಿಸಲು ಆರ್ಥಿಕ ಮಿತಿ ಹೇರುವುದು ಸರಿಯಲ್ಲ – ಸುಪ್ರೀಂ ಚಾಟಿ
ನವದೆಹಲಿ: ಸರಕಾರಿ ಇಲಾಖೆಗಳಲ್ಲಿ ದಿನಗೂಲಿ ನೌಕರರ ಸೇವೆ ಖಾಯಂಗೊಳಿಸಲು ಆರ್ಥಿಕ ಮಿತಿ ಹೇರುವುದು ಸರಿಯಲ್ಲ ಎಂದು ಉತ್ತರ ಪ್ರದೇಶದ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.
ಉತ್ತರ ಪ್ರದೇಶದ ಉನ್ನತ ಶಿಕ್ಷಣ ಇಲಾಖೆಯಲ್ಲಿ ದೀರ್ಘ ಕಾಲದಿಂದ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ನೌಕರರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮನಾಥ್ ಅವರಿದ್ದ ನ್ಯಾಯಪೀಠವು, ಸರಕಾರಿ ಇಲಾಖೆಗಳಲ್ಲಿ ದಶಕಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ದಿನಗೂಲಿ ನೌಕರರ ಸೇವೆ ಖಾಯಂಗೊಳಿಸುವುದಕ್ಕೆ ಆರ್ಥಿಕ ಮಿತಿ ಹೇರುವುದು ಸರಿಯಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ದಶಕಗಳಿಂದ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ದಿನಗೂಲಿ ನೌಕರರ ಸೇವೆಯನ್ನು ಖಾಯಂ ನೌಕರಿಗೆ ಪರಿಗಣಿಸಲು ಆರ್ಥಿಕ ಮಿತಿಯನ್ನು ‘ತಾಯತ ರಕ್ಷಾ ಕವಚ’ದಂತೆ ಬಳಸುತ್ತಿರುವುದು ಸರಿಯಾದ ನಡೆಯಲ್ಲ.
“ಕೇಂದ್ರ ಹಾಗೂ ರಾಜ್ಯ ಸರಕಾರಗಳೂ ಒಳಗೊಂಡಂತೆ ವಿವಿಧ ಸರಕಾರಗಳು ಸಾಂವಿಧಾನಿಕ ಉದ್ಯೋಗದಾತರಿದ್ದಂತೆ. ದಿನಗೂಲಿ ನೌಕರರಿಗೆ ತಕ್ಕ ವೇತನ ನಿರಾಕರಿಸುವ ಪ್ರಯತ್ನ ಮಾಡಬಾರದು. ಈ ಮೂಲಕ ಬಜೆಟ್ ನಲ್ಲಿ ಸಮತೋಲನ ಕಾಪಾಡಿಕೊಳ್ಳುವ ಪ್ರಯತ್ನ ಮಾಡಬಾರದು. ಹೀಗೆ ಮಾಡಿದಲ್ಲಿ ನೌಕರರ ವಿಶ್ವಾಸ ಕುಗ್ಗಿಸಿದಂತಾಗುತ್ತದೆ” ಎಂದು ನ್ಯಾಯಪೀಠ ಹೇಳಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
