ನಾಲ್ಕು ವಾರದೊಳಗೆ ಸರ್ಕಾರಿ ವಕೀಲರಿಗೆ 44.59 ಲಕ್ಷ ರೂ. ಶುಲ್ಕ ಪಾವತಿಸಿ – ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಸರ್ಕಾರಿ ಹಿರಿಯ ವಕೀಲರೊಬ್ಬರಿಗೆ ಶುಲ್ಕಪಾವತಿಸಲು ವಿಳಂಬ ಧೋರಣೆ ತಾಳಿದ ಸರ್ಕಾರಕ್ಕೆ ಚಾಟಿ ಬೀಸಿರುವ ರಾಜ್ಯ ಹೈಕೋರ್ಟ್, ನಾಲ್ಕು ವಾರದೊಳಗೆ ಸರ್ಕಾರಿ ವಕೀಲರಿಗೆ 44.59 ಲಕ್ಷ ರೂ. ಶುಲ್ಕ ಪಾವತಿಸಿಬೇಕು ಎಂದು ಆದೇಶ ಹೊರಡಿಸಿದೆ.
ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಹೈಕೋರ್ಟ್ನ ಹಿರಿಯ ವಕೀಲವಿಜಯಕುಮಾರ್ ಎಂ.ಶೀಲವಂತ ಅವರು’ರಾಜ್ಯ ಸರ್ಕಾರ ನನಗೆ ಪಾವತಿಸಬೇಕಾದ ಶುಲ್ಕವನ್ನು ಇನ್ನೂ ಪಾವತಿಸಿಲ್ಲ’ ಎಂದು ಆಕ್ಷೇಪಿಸಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆಗೆ ಪುರಷ್ಕರಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ)ವು ಹಿರಿಯ ವಕೀಲವಿಜಯಕುಮಾರ್ ಎಂ.ಶೀಲವಂತ ಅವರಿಗೆ ಶುಲ್ಕದ ಮೊತ್ತ Rs 44.59 ಲಕ್ಷವನ್ನು ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಅಲ್ಲದೆ ಈ ಕುರಿತ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದೂ ತಾಕೀತು ಮಾಡಿದೆ.
‘ಅಡ್ವಕೇಟ್ ಜನರಲ್, ಹೆಚ್ಚುವರಿ ಅಡ್ವಕೇಟ್ ಜನರಲ್ ಗಳು, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳು, ಸರ್ಕಾರಿ ವಕೀಲರು ಅಥವಾ ಹೈಕೋರ್ಟ್ನ ಸರ್ಕಾರಿ ಫೀಡರ್ಗಳು… ಇತ್ಯಾದಿ ಸರ್ಕಾರದ ಪರ ವಾದ ಮಂಡಿಸುವ ವಕೀಲರ ಶುಲ್ಕ ಪಾವತಿಯಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸಬಾರದು’ ಎಂದು ನ್ಯಾಯಪೀಠ ಸೂಚಿಸಿದೆ.
‘ಸರ್ಕಾರದ ಪರ ವಾದ ಮಂಡಿಸುವ ವಕೀಲರಿಗೆ ಸಕಾಲದಲ್ಲಿ ಶುಲ್ಕ ಪಾವತಿ ಮಾಡುವ ನಿಟ್ಟಿನಲ್ಲಿ ಮತ್ತು ಶುಲ್ಕ ಪಾವತಿ ವ್ಯವಸ್ಥೆ ಪಾರದರ್ಶಕವಾಗಿರುವಂತೆ ಅಗತ್ಯ ಡಿಜಿಟಲ್ ವ್ಯವಸ್ಥೆಯೊಂದನ್ನು ರೂಪಿಸಿ’ ಎಂದು ರಾಜ್ಯ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿರುವ ನ್ಯಾಯಪೀಠ ಈ ದಿಸೆಯಲ್ಲಿ ಮಾರ್ಗದರ್ಶಿ ಸೂತ್ರಾಂಶಗಳನ್ನೂ ವಿವರಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
