05/05/2026

Law Guide Kannada

Online Guide

ಆಧಾರ್ ಕಾರ್ಡ್ ಸೂಕ್ತ ಕಾನೂನು ತಿದ್ದುಪಡಿ: ಸುಪ್ರೀಂನಿಂದ ಮಹತ್ವದ ಅಭಿಪ್ರಾಯ

ನವದೆಹಲಿ: ಆರು ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಆಧಾರ್ ಕಾರ್ಡ್ ಕೊಡುವುದಕ್ಕೆ ಸಂಸತ್ತಿನ ಮಧ್ಯಪ್ರವೇಶ ಮತ್ತು ಪ್ರಸಕ್ತ ಕಾನೂನಿನ ಸೂಕ್ತ ತಿದ್ದುಪಡಿಯ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಕನಿಷ್ಠ ಆರು ವರ್ಷ ಮೇಲ್ಪಟ್ಟವರಿಗೆ ಮಾತ್ರವೇ ಆಧಾರ್ ಕಾರ್ಡ್ ಮಂಜೂರು ಮಾಡುವಂತೆ ಭಾರತೀಯ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರಕ್ಕೆ ನಿರ್ದೇಶನ ಕೋರಿ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆ ಮಾಡಲಾಗಿತ್ತು.

ನುಸುಳುಕೋರರ ತಡೆಯುವ ನಿಟ್ಟಿನಲ್ಲಿ ಹದಿಹರೆಯದವರು ಮತ್ತು ವಯಸ್ಕರಿಗೆ ಮಾತ್ರವೇ ಆಧಾರ್ ಮಂಜೂರು ಮಾಡಲು ಮಾರ್ಗಸೂಚಿಗಳನ್ನು ರೂಪಿಸಲು ನಿರ್ದೇಶಿಸುವಂತೆ ಪಿಐಎಲ್ ನಲ್ಲಿ ಕೋರಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾ. ಜೋಯ್ಯಲ್ಯ ಬಾಗ್ಚಿ ಇರುವ ಪೀಠವು, ಅರ್ಜಿದಾರರು ಇದಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು ಸರ್ಕಾರ ಮತ್ತು ಸಂಬಂಧಪಟ್ಟ ಇತರ ಎಲ್ಲರ ಜತೆ ಚರ್ಚಿಸಿ ಪರಿಹಾರ ಪಡೆಯಬಹುದು ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತು. ಇದನ್ನೊಂದು ಮನವಿ ಎಂದಷ್ಟೇ ಪರಿಗಣಿಸಬೇಕು ಎಂದು ನಿರ್ದೇಶಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.