ಕೃತಕ ಬುದ್ದಿಮತ್ತೆಗೆ (AI) ನ್ಯಾಯಾಂಗದ ವಿವೇಚನೆ, ನ್ಯಾಯಾಧೀಶರ ಸ್ಥಾನ ತುಂಬಲು ಸಾಧ್ಯವಿಲ್ಲ- CJI ಸೂರ್ಯಕಾಂತ್
ನವದೆಹಲಿ: ನ್ಯಾಯಾಂಗ ಪ್ರಕ್ರಿಯೆಗೆ ಕೃತಕ ಬುದ್ದಿಮತ್ತೆಗೆ (AI) ನೆರವು ನೀಡಬಹುದು. ಆದರೆ ನ್ಯಾಯಾಧೀಶರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ತಿಳಿಸಿದ್ದಾರೆ.
ಉಲ್ಲೇಕಿಸ್ತಾನ ಪ್ರವಾಸದಲ್ಲಿರುವ ಸಿಜೆಐ ಸೂರ್ಯಕಾಂತ್ ಅವರು ನ್ಯಾಯಾಂಗದಲ್ಲಿ ತಂತ್ರಜ್ಞಾನದ ಬಳಕೆ ಕುರಿತು ಮಾತನಾಡಿದ್ದಾರೆ, ಸಾಂವಿಧಾನಿಕ ಕರ್ತವ್ಯಗಳಿಗೆ ಬದ್ಧವಾಗಿ ತಂತ್ರಜ್ಞಾನವನ್ನು ಎಷ್ಟು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದಷ್ಟೇ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.
ನ್ಯಾಯಾಂಗ ಪ್ರಕ್ರಿಯೆಗಳಿಗೆ ಕೃತಕ ಬುದ್ಧಿಮತ್ತೆ ಸಂಶೋಧನೆ ಪೂರಕವಾಗಿ ಕೆಲಸ ಮಾಡಬಹುದು. ಆದರೆ ನ್ಯಾಯಾಂಗದ ವಿವೇಚನೆ ಹಾಗೂ ತೀರ್ಪು ನೀಡುವ ನ್ಯಾಯಾಧೀಶರ ಸ್ಥಾನವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ ನ್ಯಾಯಾಂಗದಲ್ಲಿ ತಂತ್ರಜ್ಞಾನದ ಬಳಕೆ ನ್ಯಾಯದಾನ ಪ್ರಕ್ರಿಯೆಯನ್ನು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿಸಬೇಕೇ ಹೊರತು, ಅದು ಸಮಾಜದ ದುರ್ಬಲ ವರ್ಗದವರನ್ನು ದೂರವಿಡುವಂತಾಗಬಾರದು. ಹಾಗೆಯೇ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೂ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಡೇಟಾ ಮತ್ತು ಎಐ ಮೇಲಿನ ನಮ್ಮ ಅವಲಂಬನೆ ಹೆಚ್ಚುತ್ತಿದೆ. ಆದರೆ ಅವುಗಳ ಬಳಕೆಯನ್ನು ನಿಯಂತ್ರಿಸುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಹೀಗಾಗಿ ಸುಪ್ರೀಂ ಕೋರ್ಟ್ ಎ.ಐ ಸಮಿತಿಯು 2026ರ ಜೂನ್ ನಲ್ಲಿ ನ್ಯಾಯಾಲಗಳಲ್ಲಿ ಎ.ಐ ಬಳಕೆ ಕುರಿತು ಕರಡು ನಿಯಮಗಳನ್ನು ರೂಪಿಸಿತ್ತು. ಇದರಲ್ಲಿ ಮಾನವನ ವಿವೇಚನೆಗಳಿಗಷ್ಟೇ ಆದ್ಯತೆ ನೀಡಿದ್ದು, ಎ.ಐ ಕೇವಲ ಸಂಶೋಧನೆ ಹಾಗೂ ಕಲಾಪ ಪ್ರಕ್ರಿಯೆಗಳಿಗೆ ಮಾತ್ರ ನೆರವಾಗಬಲ್ಲದು ಎಂಬುದನ್ನು ಸ್ಪಷ್ಟಪಡಿಸಿವೆ ಎಂದು ತಿಳಿಸಿದ್ದಾರೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
