09/06/2026

Law Guide Kannada

Online Guide

ವೈವಾಹಿಕ ಸಂಬಂಧದಿಂದ ದೂರವಿರುವುದು ಮಾನಸಿಕ ಕ್ರೌರ್ಯ: ಇದು ಡೈವರ್ಸ್ ಗೆ ಕಾರಣವಾಗುತ್ತೆ- ಸುಪ್ರೀಂ

ನವದೆಹಲಿ: ಸಮಂಜಸ ಕಾರಣವಿಲ್ಲದೆ ನಿರಂತರವಾಗಿ ದಾಂಪತ್ಯ ಸಂಬಂಧ ನಿರಾಕರಣೆಯು ಮೌನಸಿಕ ಕ್ರೌರ್ಯವಾಗಿದ್ದು ಇದು ವಿಚ್ಚೇದನಕ್ಕೆ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ರಾಜಸ್ಥಾನದ ವೈದ್ಯರೊಬ್ಬರು ತಮ್ಮ ಪತ್ನಿ ಲೈಂಗಿಕ ಸಂಬಂಧ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ಪತ್ನಿಯಿಂದ ವಿಚ್ಚೇದನ ಕೋರಿ ರಾಜಸ್ಥಾನ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಪತಿಗೆ ವಿಚ್ಚೇದನ ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಪತ್ನಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ನ್ಯಾಯಪೀಠವು . ಯಾವುದೇ ಸಮಂಜಸವಾದ ಕಾರಣವಿಲ್ಲದೆ, ನಿರಂತರವಾಗಿ ದಾಂಪತ್ಯ ಸಂಬಂಧ ನಿರಾಕರಿಸುವುದು ಮೌನಸಿಕ ಕ್ರೌರ್ಯ ಮತ್ತು ಇದು ವಿಚ್ಚೇದನಕ್ಕೆ ಆಧಾರವಾಗುತ್ತದೆ. ಮದುವೆಯಾಗಿ ಕೆಲವೇ ತಿಂಗಳು ದಾಂಪತ್ಯ ಜೀವನ ನಡೆಸಿದ್ದರೂ, ಇಬ್ಬರ ನಡುವೆ ವೈವಾಹಿಕ ಬಾಂಧವ್ಯ ಏರ್ಪಟ್ಟಿಲ್ಲ ಮತ್ತು ಎಲ್ಲ ಹಂತದಲ್ಲೂ ಅರ್ಜಿದಾರ ಪತ್ನಿ ವಿವಾಹ ವಿಚ್ಚೇದನದ ನಿರ್ಧಾರಕ್ಕೆ ಮುಂದಾಗಲಿಲ್ಲ.

ವೈವಾಹಿಕ ಸಂಬಂಧದಿಂದ ದೂರು ಉಳಿಯುವುದು ಮಾನಸಿಕ ಕ್ರೌರ್ಯ ಆಗಿದೆ. ಇದು ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13(1)ia ರ ಅಡಿಯಲ್ಲಿ ವಿಚ್ಚೇದನಕ್ಕೆ ಒಂದು ಆಧಾರವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

2007ರಲ್ಲಿ ಸುಪ್ರೀಂ ಕೋರ್ಟ್ “ಸಮರ್ ಘೋಷ್ ವಿರುದ್ಧ ಜಯಾ ಘೋಷ್” ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಗಂಡ ತನ್ನ ದಾಂಪತ್ಯ ಸಂಬಂಧವನ್ನು ಸ್ಥಾಪಿಸಲು ನಿರಂತರವಾಗಿ ನಿರಾಕರಿಸಿವುದುನ್ನು ಗಮನಿಸಿದೆ. ಮತ್ತು ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪು ಎತ್ತಿ ಹಿಡಿಯಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.